ಸತ್ತವರ ಪೋಟೋವನ್ನ ದೇವರ ಮನೆಯಲ್ಲಿ ಇಟ್ಟರೆ ಏನೆಲ್ಲಾ ತೊಂದರೆ ಇದೆ ನೀವೇ ನೋಡಿ | Oneindia Kannada

2017-11-15 1,930

ಹಿಂದೂ ಸಪ್ರದಾಯಸ್ತ ಮನೆಯಲ್ಲಿ ಪೂಜಾ ಮಂದಿರ ಅಥವಾ ದೇವರ ಕೋಣೆ ಇದ್ದೇ ಇರುತ್ತದೆ. ಆ ಕೋಣೆಯಲ್ಲಿ ದೇವಾನು ದೇವತೆಗಳ ಚಿತ್ರಪಟಗಳು, ವಿಗ್ರಹಗಳನ್ನಿಟ್ಟು ನಿತ್ಯ ಪೂಜೆ ಮಾಡುವುದು ಸಂಪ್ರದಾಯ. ಇದು ಸಹಜಾತಿ ಸಹಜ ಅಲ್ಲವೇ? ಆದರೆ ಕೆಲವರು ದೇವರ ಕೋಣೆಯಲ್ಲಿ ಸತ್ತವರ ಫೋಟೋಗಳನ್ನು ಇಡುತ್ತಾರೆ. ಈ ರೀತಿ ಮಾಡುವುದು ಒಳ್ಳೆಯದೆಂದು, ಸತ್ತವರು ಹೇಗೂ ದೈವ ಸಮಾನ ಅಲ್ಲವೇ ಎಂದು ಕೆಲವರು ಆ ಕೆಲಸ ಮಾಡುತ್ತಾರೆ. ಅದರ ಭಾಗವಾಗಿಯೇ ನಿತ್ಯ ದೇವರ ಫೋಟೋ ಜತೆಗೆ ಆ ಫೋಟೋಗಳನ್ನೂ ಪೂಜಿಸುತ್ತಾರೆ. ಆದರೆ ಈ ರೀತಿ ಮಾಡಬಹುದೇ..? ಸತ್ತವರ ಫೋಟೋಗಳನ್ನು ದೇವರಕೋಣೆಯಲ್ಲಿ ದೈವದ ಪಕ್ಕದಲ್ಲೇ ಇಟ್ಟು ಪೂಜಿಸಬಹುದೇ..? ಎಂಬುದನ್ನು ಈಗ ತಿಳಿದುಕೊಳ್ಳೋಣ.ಸತ್ತವರು ಬದುಕಿರುವವರಿಗೆ ಎಷ್ಟೇ ಹತ್ತಿರದವರು, ಆತ್ಮೀಯರಾದರೂ, ಪ್ರೀತಿಪಾತ್ರರು ಆಗಿದ್ದರೂ ಸರಿ ಯಾವುದೇ ಕಾರಣಕ್ಕೂ ಫೋಟೋಗಳನ್ನು ದೇವರಕೋಣೆಯಲ್ಲಿ ಇಡಬಾರದು. ಅದರಲ್ಲೂ ದೈವದ ಪಕ್ಕದಲ್ಲೇ ಯಾವುದೇ ಕಾರಣಕ್ಕೂ ಇಡಬಾರದು. ಕೂಡಲೆ ತೆಗೆಯುವುದು ಒಳಿತು. ವಾಸ್ತು ಪ್ರಕಾರ ಆ ರೀತಿ ಸತ್ತವರ ಫೋಟೋಗಳನ್ನು ದೇವರ ಪಕ್ಕದಲ್ಲಿ ಇಡುವುದು ದೋಷವಂತೆ. ಇದರಿಂದ ಆ ಮನೆಯಲ್ಲಿ ಇರುವವರಿಗೆ ಎಲ್ಲಾ ಅಂಶಗಳಲ್ಲೂ ಸಮಸ್ಯೆಗಳೇ ಬರುತ್ತವಂತೆ. ಜೀವನವೆಲ್ಲಾ ಕಷ್ಟಗಳಿಂದ ಕೂಡಿರುತ್ತದಂತೆ.ಇನ್ನು ದೈವದ ಪಕ್ಕದಲ್ಲಿ ಸತ್ತವರ ಫೋಟೋಗಳನ್ನು ಇಡಬಾರದು ಎಂಬುದಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ…ಮನುಷ್ಯ ಸತ್ತರೂ ಆತನ ಆತ್ಮ ಸಾಯಲ್ಲ ಅಲ್ಲವೇ, ತನಗೆ ಆತ್ಮೀಯರಾದವರ ಸುತ್ತ ಯಾವಾಗಲೂ ಅದು ಇರುತ್ತದಂತೆ. ಒಂದು ವೇಳೆ ಆ ರೀತಿಯ ವ್ಯಕ್ತಿಯ ಫೋಟೋ ಇಟ್ಟು ಪೂಜಿಸಿದರೆ ಆ ಆತ್ಮವನ್ನು ಪೂಜಿಸಿದಂತೆ. ಅಂದರೆ ದೆವ್ವವನ್ನು ಪೂಜಿಸಿದಂತಾಗುತ್ತದೆ. ದೇವರು, ದೆವ್ವ ಎರಡನ್ನೂ ಅಕ್ಕಪಕ್ಕ ಇಟ್ಟು ಪೂಜಿಸಬಾರದು. ಅದು ಶಾಸ್ತ್ರ ಸಮ್ಮತ ಅಲ್ಲ. ಹಾಗಾಗಿ ಆ ರೀತಿ ಮಾಡಬಾರದು ಎನ್ನುತ್ತವೆ ಶಾಸ್ತ್ರಗಳು.ದೇವರ ಕೋಣೆಯಲ್ಲಿ ಸತ್ತವರ ಫೋಟೋಗಳನ್ನು ಇಟ್ಟರೆ ಆ ಮನೆಯಲ್ಲಿ ಇರುವವರಿಗೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದೆವಲ್ಲವೇ. ಅವುಗಳಲ್ಲಿ ಮುಖ್ಯವಾಗಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಇರುತ್ತವೆ. ಆರೋಗ್ಯ ಯಾರಿಗೂ ಚೆನ್ನಾಗಿರಲ್ಲವಂತೆ.ದೇವರ ಕೋಣೆಯಲ್ಲಿ ಆ ರೀತಿ ಫೋಟೋಗಳನ್ನು ಇಟ್ಟರೆ ಮೊದಲು ಅವರ ಮೇಲೆ ದೃಷ್ಟಿ ಬಿದ್ದು ದೈವದ ಮೇಲೆ ದೃಷ್ಟಿ ಇಡಕ್ಕಾಗಲ್ಲ. ಹಾಗಾಗಿ ಪೂಜೆ ಸರಿಯಾಗಿ ಮಾಡಲು ಸಾಧ್ಯವಾಗಲ್ಲ. ಅದು ದೋಷವಾಗುತ್ತದೆ. ಆ ರೀತಿಯ ಪೂಜೆ ಫಲಿತ ಕೊಡಲ್ಲ. ಆದಕಾರಣ ಪೂಜಾಕೋಣೆಯಲ್ಲಿ ಸತ್ತವರ ಫೋಟೋಗಳನ್ನು ಇಟ್ಟಿದ್ದರೆ ಕೂಡಲೆ ತೆಗೆಯುವುದು ಒಳಿತು.

This photos should not kept in pooja room ,.watch this video

Videos similaires